ಮೂಡಬಿದಿರೆ: ಲಯನ್ಸ್ ಕ್ಲಬ್(lions Club) ಮೂಡುಬಿದಿರೆ ವತಿಯಿಂದ ಲಯನ್ಸ್ ಜಿಲ್ಲೆ 317ಡಿಯ ರಾಜ್ಯಪಾಲರ ಕಾರ್ಯಕ್ರಮದಡಿ ಶ್ರೀ ಮಹಾವೀರ ಕಾಲೇಜಿನ(Mahaveer College) ಜಿ.ವಿ.ಪೈ ಕ್ರೀಡಾಂಗಣದಲ್ಲಿ ರಸ್ತೆ ಸುರಕ್ಷತೆ ಕಾರ್ಯಕ್ರಮದಂಗವಾಗಿ ಲಘುವಾಹನ ಚಾಲನೆ ಕೌಶಲ್ಯ, ದ್ವಿಚಕ್ರ ವಾಹನ ಮತ್ತು ಸೈಕಲ್ ಸವಾರಿ ಕೌಶಲ್ಯ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಬೆದ್ರ ಅಡ್ವೆಂಚರ್ಸ್ಕ್ಲಬ್ ಸಹಕಾರದೊಂದಿಗೆ ಸ್ಪರ್ಧೆಯನ್ನು ಲಯನ್ಸ್ ಜಿಲ್ಲಾ ರಾಜ್ಯಪಾಲ ಸಂಜಿತ್ ಶೆಟ್ಟಿ (Sanjith Shetty)ಉದ್ಘಾಟಿಸಿದರು. ಮಂಗಳೂರು ಪೊಲೀಸ್ ಕಮಿಷನರೇಟ್(Police Commissioner) ಪೊಲೀಸ್ ಉಪಾಯುಕ್ತ ಬಿ.ಪಿ ದಿನೇಶ್ ಕುಮಾರ್, ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ರಸ್ತೆ ಸುರಕ್ಷತಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಶಿವಪ್ರಸಾದ್ ಹೆಗ್ಡೆ(Shivaprasad Hegde) ಅಧ್ಯಕ್ಷತೆ ವಹಿಸಿದ್ದರು. ಮಲ್ಟಿಪಲ್ ಕೌನ್ಸಿಲ್ ಚೇರ್‌ಮೆನ್ ವಸಂತ ಕುಮಾರ್ ಶೆಟ್ಟಿ, ಜಿಲ್ಲಾ ಉಪ ರಾಜ್ಯಪಾಲ ಡಾ. ಮೇಲ್ವಿನ್ ಡಿಸೋಜ, ಸಂಪುಟದ ಪದಾಧಿಕಾರಿಗಳಾದ ಪಿ.ವಿ. ಅನಿಲ್ ಕುಮಾರ್, ವಿಜಯ ವಿಷ್ಣು ಮಯ್ಯ, ಪ್ರಸಾದ್ ರೈ ಕಲ್ಲಿಮಾರ್, ಎಂ.ಕೆ ದಿನೇಶ್, ವೆಂಕಟೇಶ ಪ್ರಭು, ಮುರಳಿಧರನ್ ಪಿ.ಆರ್, ವಾಸು ಎಸ್., ಜಗದೀಶ್ಚಚಂದ್ರ ಡಿ.ಕೆ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಉಪರಾಜ್ಯಪಾಲರಾದ ಲಯನ್ ಮೆಲ್ವಿನ್ ಡಿಸೋಜ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಬೆದ್ರ ಅಡ್ವೆಂಚರ್ಸ್ ಕ್ಲಬ್‌ನ ಅಕ್ಷಯ್ ಜೈನ್, ಮೂಡುಬಿದಿರೆ ಲಯನ್ಸ್ ಅಧ್ಯಕ್ಷ ಎಂ.ಕೆ. ದಿನೇಶ್, ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಮುರಳೀಧರನ್ ಪಿ.ಅರ್. ಮತ್ತಿತರರು ಉಪಸ್ಥಿತರಿದ್ದರು.
ದಾಮೋದರ ನಾಯಕ್ ವಿಜೇತರ ಪಟ್ಟಿ ವಾಚಿಸಿದರು. ಹರೀಶ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.
ಒಟ್ಟು 51ಮಂದಿ ವಾಣಿಜ್ಯ ಉದ್ದೇಶದ ವಾಹನಗಳ ಚಾಲಕರಿಗೆ ಸ್ಥಳದಲ್ಲೇ ನೋಂದಣಿ ನಡೆಸಿ ರೂ. 1 ಲಕ್ಷದ ವಿಮಾ ಪಾಲಿಸಿ ಮಾಡಿಸಲಾಯಿತು.
ಫಲಿತಾಂಶ:
ಲಘು ಮೋಟಾರು ವಾಹನ ಹಿಮ್ಮುಖ ಚಾಲನೆ (ಪುರುಷರ ವಿಭಾಗ)-ಅಜಿತ್ (ಪ್ರಥಮ) ಪವನ್ ಭಟ್ (ದ್ವಿತೀಯ).
ಲಘು ಮೋಟಾರು ವಾಹನ ಹಿಮ್ಮುಖ ಚಾಲನೆ (ಮಹಿಳಾ ವಿಭಾಗ)-ಜೀವಿತಾ ಶಂಕರ್ (ಪ್ರ), ಜ್ಯೋತಿ ಮನೋಹರ್ (ದ್ವಿ) ಶಿವಾನ್ ಸೆರಾವೋ (ದ್ವಿ).
ಲಘು ಮೋಟಾರು ವಾಹನ ಹಿಮ್ಮುಖ ಚಾಲನೆ, ಕ್ಲಬ್ ಲೆವೆಲ್ (ಪುರುಷರ ವಿಭಾಗ)- ಪ್ರವೀಣ್ ಪಿರೇರಾ (ಪ್ರ) ಪ್ರಖ್ಯಾತ್ ಹೆಗ್ಡೆ (ದ್ವಿ).
ದ್ವಿಚಕ್ರ ವಾಹನ ನಿಧಾನ ಗತಿಯ ಸವಾರಿ (ಗೇರ್ ಸಹಿತ) ಪುರುಷರ ವಿಭಾಗ- ರಾಜ್ ಪ್ರಸಾದ್ (ಪ್ರ), ಆಲ್ತಮಾಶ್ (ದ್ವಿ).
ದ್ವಿಚಕ್ರ ವಾಹನ ನಿಧಾನ ಗತಿಯ ಸವಾರಿ (ಗೇರ್ ರಹಿತ) ಪುರುಷರ ವಿಭಾಗ- ಆದೀಶ್ ಶೆಟ್ಟಿ (ಪ್ರ) ಪಂಚಮ್ (ದ್ವಿ).
ದ್ವಿಚಕ್ರ ವಾಹನ ನಿಧಾನ ಗತಿಯ ಸವಾರಿ (ಗೇರ್ ರಹಿತ) ಮಹಿಳೆಯರ ವಿಭಾಗ-ಡೋರಾ ಡಿಸೋಜ (ಪ್ರ) ರೇಷ್ಮಾ ಫ್ಲಾವಿಯಾ ಮೊರಾಸ್(ಪ್ರ) ನಿಶ್ಮಿತಾ ಗಣೇಶ್ (ದ್ವಿ)
ಸ್ಲೋ ಸೈಕಲ್ ರೈಡಿಂಗ್ 12 ವಯೋಮಿತಿಯ (ಬಾಲಕರ ವಿಭಾಗ)-ಮಹಮ್ಮದ್ ಶಫೀಕ್ (ಪ್ರ), ಸಹಾಲ್ (ದ್ವಿ).
ಸ್ಲೋ ಸೈಕಲ್ ರೈಡಿಂಗ್ 18 ವಯೋಮಿತಿಯ ಬಾಲಕರ ವಿಭಾಗ- ಶ್ರೀಥನ್ (ಪ್ರ)
ಸ್ಲೋ ಸೈಕಲ್ ರೈಡಿಂಗ್ 12 ವಯೋಮಿತಿಯ ಬಾಲಕಿಯರ ವಿಭಾಗ- ಸನಿಹಾ ಜೈನ್ (ಪ್ರ), ಆಶ್ನಾ (ದ್ವಿ)