News Karnataka
ವಿಶೇಷ

ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

how-to-maintain-heart-health
Photo Credit : Pixabay

ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ನಮ್ಮ ಹೃದಯದ ಆರೋಗ್ಯವನ್ನು ಕಾಪಡಿಕೊಳ್ಳಲು ನಾವು ಉತ್ತಮವಾದ ಹಾಗೂ ಸಮತೋಲಿತ ಆಹಾರವನ್ನು ಸೇವಿಸುವುದರ ಜೊತೆಗೆ ಅಗತ್ಯಕ್ಕೆ ತಕ್ಕಷ್ಟು ದೈಹಿಕವಾಕಗಿ ದೇಹವನ್ನು ದಣಿಸುವುದರಿಂದ ಕೂಡ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ನಾವು ಸೇವಿಸುವ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದು ಬಹಳ ಉತ್ತಮ ಎಂದು ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್‌ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ಬದಲಾದ ಕಾಲಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ದತಿಯೂ ಸಹ ಬದಲಾಗಿದೆ. ಮೈದಾ, ಪ್ರೊಸೆಸ್ಡ್ ಆಹಾರಗಳನ್ನು ಸೇವಿಸುವ ಬದಲು ಹೋಲ್ ಗ್ರೇನ್ ಗಳನ್ನು ಬಳಸುವುದು ನಮ್ಮ ಹೃದಯದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

ಉತ್ತಮ ಆಹಾರದ ಜೊತೆಗೆ ಪ್ರೋಟಿನ್‌ಗಾಗಿ ಮಾಂಸಹಾರಿಗಳಿಗೆ ಪ್ರೋಟಿನ್ ಮೂಲವಾಗಿ ಮೀನು ಮಾಂಸಗಳಲ್ಲಿ ಸಿಗುವುದರಿಂದ ಸಸ್ಯಹಾರಿಗಳು ಒಣ ದ್ರಾಕ್ಷಿ, ಬಾದಾಮಿ, ವಾಲ್‌ನಟ್ಸ್, ಸೂರ್ಯಕಾಂತಿ ಬೀಜಗಳು, ಹಣ್ಣುಗಳಾದ ಅವಕಾಡೋ ಮುಂತಾದ ಉತ್ತಮ ಹಣ್ಣುಗಳನ್ನು ಸೇವಿಸಬೇಕು.

ಆಹಾರದ ಜೊತೆಗೆ ಎಣ್ಣೆಯು ಸಹ ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುವಲ್ಲಿ ಉತ್ತಮ ಪಾತ್ರ ನಿರ್ವಹಿಸುತ್ತದೆ. ರೀಫೈಡ್ ಎಣ್ಣೆಯನ್ನು ಬಳಸುವ ಬದಲು ತೆಂಗಿನ ಎಣ್ಣೆ, ಕಡ್ಲೆ ಎಣ್ಣೆ, ಅಥವಾ ಸಾಸಿವೆ ಎಣ್ಣೆಯನ್ನು ನಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು.

ಪ್ರೊಸೆಸ್ಡ್ ಆಹಾರಗಳು, ರೆಡಿ ಟು ಈಟ್ ಆಹಾರಗಳು, ಹಾಗೂ ಫ್ರೋಝನ್ ಆಹಾರಗಳನ್ನು ಸಾಧ್ಯವಾದಷ್ಟು ನಿಲ್ಲಿಸುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು.

ಮುಖ್ಯವಾಗಿ ಸಕ್ಕರೆ ಅಂಶ ನಮ್ಮ ದೇಹಕ್ಕೆ ಇರುವುದರಲ್ಲಿ ಬಹಳಷ್ಟು ಹಾನಿಕಾರಕ. ಈ ಸಕ್ಕರೆ ಅಂಶವು ನಮ್ಮ ದೇಹಕ್ಕೆ ಕಾಫಿ, ಜೂಸ್, ಟಿ, ಕೆಚಪ್ ಮುಂತಾದ ರೂಪದಲ್ಲಿ ಸಕ್ಕರೆಯು ನಮ್ಮ ದೇಹ ಸೇರುತ್ತಿದೆ ಇವುಗಳಿಂದ ಸಾಧ್ಯವಾದಷ್ಟು ದೂರವಿರುವುದರಿಂದ ನಮ್ಮ ಹೃದಯದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *