ಮೂಡುಬಿದಿರೆ: ಅಲಂಗಾರು ಜಗದ್ಗುರು ಶ್ರೀ ಅಯ್ಯಪ್ಪ ಸ್ವಾಮಿ (Jagadguru Shree Ayyappa Swami)ಮಠದಲ್ಲಿ ಗುರು ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ಸೋಮವಾರ ಮೂವರು ವಟುಗಳಿಗೆ ಸಾಮೂಹಿಕ ಉಪನಯನ ನಡೆಯಿತು.
ಅಲಂಗಾರು ಮಠದ ವ್ಯವಸ್ಥಾಪಕ ವಿಶ್ವನಾಥ ಪುರೋಹಿತ್ (Vishwanatha Purohith)ನೇತೃತ್ವದಲ್ಲಿ ನಡೆದ ಉಪನಯನದ ಧಾರ್ಮಿಕ ವಿಧಿವಿಧಾನಗಳನ್ನು ವೈದಿಕರುಗಳಾದ ಪುರಂದರ ಪುರೋಹಿತ್ ಅಯ್ಯಪಯ್ಯಸ್ವಾಮಿ ಪುರೋಹಿತ್(Ayyappa Swamy Purohit), ವಸಂತ್ ಪುರೋಹಿತ್ ನೆರವೇರಿಸಿದರು. ಶ್ರೀ ಗುರುಮಠ ಕಾಳಿಕಾಂಬ ದೇವಸ್ಥಾನದ ತಂತ್ರಿ ಕೇಶವ ಪುರೋಹಿತ್ ಗಾಯತ್ರಿ ಯಜ್ಞ ನೆರವೇರಿಸಿದರು. ಪ್ರಕಾಶ್ ಪುರೋಹಿತ್ ಪಳ್ಳಿ, ರಕ್ಷಿತ್ ಪುರೋಹಿತ್ ಸಹಕರಿಸಿದರು.