ಮೂಡುಬಿದಿರೆ : ಯಾವುದೇ ಊರಿನ ದೇವಾಲಯ ಸುಸ್ಥಿಯಲ್ಲಿದ್ದರೆ ಆ ಊರು ಸುಸ್ಥಿಯಲ್ಲಿದ್ದಂತೆ. ನಾಡಿಗೆ ಪ್ರಸಿದ್ಧವಾಗಿರುವ ಮಿಜಾರಿನ ಜನತೆ ಸಾಂಘಿಕವಾಗಿ ಊರಿನ ದೇವಸ್ಥಾನವನ್ನು ಉತ್ತಮವಾಗಿ ಪುನರ್ ನಿರ್ಮಿಸಿರುವುದು ಶ್ಲಾಘನೀಯ ಎಂದು ಪೇಜಾವರ ಮಠದ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Sri Sri Vishwaprasanna Theertha Swamiji of Pejavar Math) ಹೇಳಿದರು.
ಇಲ್ಲಿನ ಮಿಜಾರು ಮಾಗಣೆ ಕಾಂಬೆಟ್ಟು ಶ್ರೀ ಸೋಮನಾಥೇಶ್ವರ (Mijaru Maagane Kambettu Sri Somanatheshwar Temple) ಗ್ರಾಮ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಿದ್ದು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆರ್ಶೀವಚನ ನೀಡಿದರು. ಮುಂಬೈ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಶೆಟ್ಟಿ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಿದರು.
ಇದನ್ನ ಓದಿ: ‘ಸಹ ಯಾನದ ಮಾನ’ ಶತಮಾನ ಗೀತೆಯ ನೃತ್ಯ ಪ್ರದರ್ಶನ
ಮುಖ್ಯ ಅತಿಥಿಗಳಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ (Vivek Alva, Trustee of Alvas Education Foundation), ಶಾಸಕ ಡಾ.ವೈ ಭರತ್ ಶೆಟ್ಟ (MLA Dr Y Bharat Shetta) , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ (Project Officer of Sri Kshetra Dharmasthala Rural Development Scheme) ರವಿ, ಕ್ಷೇತ್ರದ ಆಡಳಿತ ಮೊಕ್ತೇಸರ ಅಶೋಕ ಶೆಟ್ಟಿ, ಕ್ಷೇತ್ರದ ತಂತ್ರಿ ಗಣೇಶ್ ತಂತ್ರಿ, ಉದ್ಯಮಿಗಳಾದ ಶ್ರೀಪತಿ ಭಟ್, ಮಿಜಾರು ನಡುಮನೆ ಮಂಜುನಾಥ ತಂತ್ರಿ ಭಾಗವಹಿಸಿದ್ದರು. ಶಿವಪ್ರಸಾದ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೊಕ್ತೇಸರ ಸಿ ಎ ಉಮೇಶ್ ರಾವ್ ಸ್ವಾಗತಿಸಿದರು. ಅದ್ಯಾಪಕ ನಿತೇಶ್ ಬಲ್ಲಾಳ್ ವಂದಿಸಿ ಕಾರ್ಯಕ್ರಮ ನಿರ್ವಹಸಿದರು.
ಏಳು ದಿನಗಳ ಕಾಲ ನಡೆದ ಈ ಕಾರ‍್ಯಕ್ರಮದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು (Cultural events) ನಡೆದಿದ್ದು ಶುಕ್ರವಾರ ಸಂಪನ್ನಗೊಂಡಿತು.