News Karnataka
Wednesday, June 07 2023
ವಿಶೇಷ

ಪ್ರಕೃತಿ ಆರಾಧನೆಯ ಹಬ್ಬ ‘ಮೊಂತಿ ಫೆಸ್ತ್’

monti-fez-a-festival-of-nature-worship
Photo Credit : NewsKannada

ಈ ವರ್ಷ ಮಾತೆ ಮರಿಯಮ್ಮನ ಜನ್ಮದಿನವನ್ನು ಸೆ. 8ರಂದು ಆಚರಿಸಲಾಗುತ್ತಿದೆ. ಹಲವೆಡೆ ಮಾತೆ ಮರಿಯಮ್ಮನ ಜನ್ಮ ದಿನವನ್ನು ಕ್ರೈಸ್ತ ಧಾರ್ಮಿಕ ಕಟ್ಟುಪಾಡುಗಳ ಕಟ್ಟಳೆಯೊಂದಿಗೆ ಆಚರಿಸಿದರೆ, ಕರಾವಳಿಯ ಕ್ರೈಸ್ತರು ಮಾತ್ರ ಇದನ್ನು ಪ್ರಕೃತಿ ಆರಾಧನೆಯ ತೆನೆಹಬ್ಬವಾಗಿ ಆಚರಿಸುತ್ತಾರೆ.

ಕರಾವಳಿಯಲ್ಲಿ ಹಿಂದೂ ಮತ್ತು ಕ್ರೈಸ್ತ ಎರಡೂ ಸಮುದಾಯಗಳು ಹೊಸ ತೆನೆಯನ್ನು ಮನೆ ತುಂಬಿಸಿಕೊಳ್ಳುವ ತೆನೆ ಹಬ್ಬ ಆಚರಿಸುತ್ತಾರೆ. ಕೆಸ್ತರು ಏಸುವಿನ ಮಾತೆಯಾದ ಮರಿಯಮ್ಮನ ಜನ್ಮ ದಿನವನ್ನೇ ತೆನೆಹಬ್ಬವಾಗಿ ಆಚರಿಸುತ್ತಾರೆ.

ಈ ಹಬ್ಬವನ್ನು ಕೊಂಕಣಿ ಭಾಷೆಯಲ್ಲಿ ‘ಮೊಂತಿ ಫೆಸ್ತ್’ ಎಂದು ಕರೆಯಲಾಗುತ್ತದೆ. 9 ದಿನಗಳು ವಿಶೇಷ ಪ್ರಾರ್ಥನೆ(ನೊವೇನಾ) ನಡೆಯುತ್ತದೆ. ಈ ಸಂದರ್ಭ ಪುಟ್ಟ ಮಕ್ಕಳು ಹೂವು ಸಂಗ್ರಹಿಸಿ ಇಗರ್ಜಿಗೆ ಆಗಮಿಸಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಹಬ್ಬದ ದಿನ ಪ್ರತೀ ಚರ್ಚ್‌ಗಳಲ್ಲಿ ದಿವ್ಯಬಲಿಪೂಜೆಯೊಂದಿಗೆ ಹೊಸ ತೆನೆಯನ್ನು ಪೂಜಿಸಲಾಗುತ್ತದೆ. ಬಳಿಕ ಪ್ರತಿಯೊಬ್ಬರಿಗೂ ಹಂಚಲಾಗುತ್ತದೆ. ಮಾತೆ ಮರಿಯಮ್ಮನಿಗೆ ಹೂವು ತಂದ ಮಕ್ಕಳಿಗೆ ಸಿಹಿ ಹಾಗೂ ಕಬ್ಬು ವಿತರಿಸಲಾಗುತ್ತದೆ.

ಈ ಹಬ್ಬದಂದು ಕೊಂಕಣಿ ಕ್ರೈಸ್ತರು ತಮ್ಮ ಮನೆಗಳಲ್ಲಿ ನಾನಾ ಬಗೆಯ ಸಸ್ಯಾಹಾರ ಖಾದ್ಯ ತಯಾರಿಸುತ್ತಾರೆ. ತೆನೆಯ ಅಕ್ಕಿಯ ಪುಡಿಯನ್ನು ಪಾಯಸದಲ್ಲಿ ಅಥವಾ ಹಾಲಿನೊಂದಿಗೆ ಸೇವಿಸುತ್ತಾರೆ. ವಿದೇಶದಲ್ಲಿರುವ ತಮ್ಮ ಕುಟುಂಬ ಸದಸ್ಯರಿಗೆ ಅಂಚೆಯ ಮೂಲಕ  ಹೊಸ ತೆನೆಯ ಅಕ್ಕಿಯನ್ನು ಕಳುಹಿಸುವ ಸಂಪ್ರದಾಯವೂ ಇದೆ. ಈ ಹಬ್ಬದಲ್ಲಿ ಸಸ್ಯಾಹಾರಿ ಭೋಜನವು ಪ್ರಧಾನವಾಗಿದ್ದು, ಕೆಸುವಿನ ದಂಟಿನ ಪದಾರ್ಥ, ಹರಿವೆ ದಂಟಿನ ಪದಾರ್ಥ, ಬೆಂಡೆಕಾಯಿ, ಹೀರೆ, ಅಲಸಂದೆ ಪಲ್ಯ, ಮುಳ್ಳುಸೌತೆಯ ಕೊಸಂಬರಿ ಒಳಗೊಂಡಿರುತ್ತದೆ. ಬಾಳೆ ಎಲೆಯಲ್ಲಿ ಹಬ್ಬದೂಟ ಸೇವಿಸುತ್ತಾರೆ.

‘ಎಟ್ಟುನೊಂಬು’ ಎಂಬ ಹೆಸರಿನಿಂದ ಮಲೆಯಾಳಿ ಸೇಂಟ್ ಥಾಮಸ್ ಕ್ರೈಸ್ತರು ಈ ಹಬ್ಬವನ್ನು ಆಚರಿಸುತ್ತಾರೆ. 8 ದಿನಗಳು  ಮರಿಯಮ್ಮನವರ ನೊವೆನಾ ಪ್ರಾರ್ಥನೆಯನ್ನು ಮಾಡುತ್ತಾರೆ. ಈ ಸಮಯದಲ್ಲಿ ಮಾಂಸ ತ್ಯಜಿಸುತ್ತಾರೆ. ಹಬ್ಬದ ದಿನದಂದು ಚರ್ಚ್‌ಗಳಲ್ಲಿ ಅನ್ನ, ಬೆಲ್ಲ ಸೇರಿಸಿ ತಯಾರಿಸಿದ ‘ಪಾಚೋರ್‌’ ಎಂಬ ಸಿಹಿಯನ್ನು ಭಕ್ತಾದಿಗಳಿಗೆ ಹಂಚಿ ಸಂಭ್ರಮಿಸುತ್ತಾರೆ.

ಈ ಹಬ್ಬಕ್ಕೆ ಸುಮಾರು 250ಗಳ ಪರಂಪರೆ ಇದೆ. ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಮಾತೆ ಮರಿಯಮ್ಮನ ಇಗರ್ಜಿ ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ.

Photo credit – Rajesh

Gayathri Gowda

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *