News Karnataka
Saturday, June 10 2023
ವಿಶೇಷ

ಛಾಯಾ ಗ್ರಾಹಕ ಜಿನೇಶ್ ಪ್ರಸಾದ್ ಅವರಿಗೆ ರಾಷ್ಟ್ರೀಯ ಚಿತ್ರಾಂಜಲಿ ಪ್ರಶಸ್ತಿ

Photo Credit : News Karnataka

ಮೂಡುಬಿದಿರೆ : ಚಿತ್ರಾಂಜಲಿ ರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ (Chitranjali National Photography Competition) ಪೊಲರ್ ಖ್ಯಾತಿಯ ಅಂತಾರಾಷ್ಟ್ರೀಯ ಛಾಯಾ ಚಿತ್ರ ಗ್ರಾಹಕ ಜಿನೇಶ್ ಪ್ರಸಾದ್ ಅವರು ಪ್ರಥಮ ಸ್ಥಾನ ಪಡೆದಿದ್ದು ದೆಹಲಿಯ ಜನ್ಪಥ್ನಲ್ಲಿ ಕಳೆದ ರವಿವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಂದ ರೂ 1 ಲಕ್ಷ ರೂ. ನಗದು ಸಹಿತ ಪ್ರಶಸ್ತಿ ಗೌರವ ಪಡೆದಿದ್ದಾರೆ. ಭಾರತ ಸರ್ಕಾರದ (Government of India) ಸಂಸ್ಕೃತಿ ಮಂತ್ರಾಲಯದಿಂದ ಕೂಡ ಮಾಡುವ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆಟರ್ ಚಿತ್ರಾಂಜಲಿ (Indira Gandhi National Center for the Author Chitanjali) ಎಂಬ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಕನ್ನಡಿಗ ಜಿನೇಶ್ ಪ್ರಸಾದ್ ಅವರಿಗೆ ಅತ್ಯುನ್ನತ ಪ್ರಶಸ್ತಿ ಪುರಸ್ಕಾರ ಲಭಿಸಿದೆ.

ಮೂಲತಃ ಕಾರ್ಕಳ ತಾಲೂಕಿನ ನೆಲ್ಲಿಕಾರಿನವರಾದ ಮೂಡುಬಿದಿರೆಯ ನಿವಾಸಿ ಜಿನೇಶ್ ಪ್ರಸಾದ್ ಅವರು ಕಳೆದ ಮೂರೂವರೆ ದಶಕಗಳಿಂದ ಛಾಯಾಚಿತ್ರಗ್ರಾಹಕರಾಗಿ, ಕಲಾತ್ಮಕ, ಸೃಜನಶೀಲ ಚಿತ್ರಗಳನ್ನು ಸೆರೆ ಹಿಡಿಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ ಕಲಾತ್ಮಕ ಛಾಯಾಚಿತ್ರಗಳಿಗೆ ಈಗಾಗಲೇ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ 500ಕ್ಕೂ ಅಧಿಕ ಗೌರವ ಪ್ರಶಸ್ತಿಗಳು ಸಂದಿರುವುದು ವಿಶೇಷ.

ಇದನ್ನ ಓದಿ: ಆದಿ ಗ್ರಾಮೋತ್ಸವ ರಜತ ಸಂಭ್ರಮ: ತುಳುವ ಸಾಧಕರಿಗೆ ನಮನ

ಇವರ ಅನೇಕ ಆಕರ್ಷಕ ಛಾಯಾಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಂಬಳ, ಮಹಾಮಸ್ತಕಾಭಿಷೇಕ (Mahamastakabhisheka), ಕುಂಭಮೇಳ (Kumbh Mela), ನೇಮೋತ್ಸವ, ನಡಾವಳಿ ಸಂದರ್ಭ ಇವರು ಕ್ಲಿಕ್ಕಿಸಿದ ಚಿತ್ರಗಳು ಪ್ರಸಿದ್ಧಿ ಪಡೆದಿವೆ. ದೇಶ ವಿದೇಶಗಳ ಛಾಯಾಚಿತ್ರ ಸಂಘಟನೆಗಳ ಜತೆ ಜಿನೇಶ್ ಪ್ರಸಾದ್ ಸಕ್ರಿಯರಾಗಿದ್ದಾರೆ.

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *