News Karnataka
Wednesday, June 07 2023
ವಿಶೇಷ

ನವರಾತ್ರಿ, ನವದುರ್ಗೆಯರನ್ನು ಪೂಜಿಸುವ ಹಬ್ಬ

navashakti-vaibhava-of-navratri
Photo Credit : Facebook

ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಿ ಶಿಷ್ಟರ ರಕ್ಷಣೆ ಮಾಡಲು ಶಕ್ತಿ ಸ್ವರೂಪಿಣಿಯಾದ ದುರ್ಗಾ ಮಾತೆಯು ಒಂಭತ್ತು ಅವತಾರಗಳನ್ನು ಎತ್ತುತ್ತಾಳೆ. ಇಡೀ ದೇಶಕ್ಕೆ ದೇಶವೇ ಈ ಹಬ್ಬದ ಆಚರಣೆಯನ್ನು ಮಡುತ್ತಾರೆ. ಕರ್ನಾಟಕದಲ್ಲಿ ನವರಾತ್ರಿಯನ್ನು ದಸರಾ ಎಂದು ಕರೆದರೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಎಂಬ ಹೆಸರಿನಿಂದ ಪರಿಚಿತವಾಗಿದೆ. ಹೀಗೆ ಹಲವಾರು ರಾಜ್ಯಗಳಲ್ಲಿ ಹಲವು ಹೆಸರುಗಳಿಂದ ಈ ನವರಾತ್ರಿಯನ್ನು ಆಚರಣೆಮಾಡಲಾಗುತ್ತದೆ.

ಹಿನ್ನಲೆ

ಪರಶಿವನ ಪತ್ನಿಯಾದ ದುರ್ಗಾ ಮಾತೆಯು ಅತ್ಯಂತ ಶಕ್ತಿಶಾಲಿಯಾಗಿದ್ದು ಆಕೆಯನ್ನು ಕಾಳಿ, ಪಾರ್ವತಿ, ಗೌರಿ, ಸತಿ, ಮಹಿಷಾಸುರ ಮರ್ಧಿನಿ ಮುಂತಾದ ರೂಪಗಳಲ್ಲಿ ಆರಾಧಿಸಲಾಗುತ್ತದೆ, ಪುರಾಣಗಳ ಪ್ರಕಾರ ಮಹಿಷಾಸುನೆಂಬ ಎಮ್ಮೆ ರೂಪದ ಅಸುರನು ತನ್ನ ಸೈನ್ಯದೊಂದಿಗೆ ದೇವಲೋಕಕ್ಕೆ ದಾಳಿ ಮಾಡಿ ದೇವತೆಗಳನ್ನು ಹೊರಗಟ್ಟಿದನು, ದೇವತೆಗಳೆಲ್ಲ ತ್ರಿಮೂರ್ತಿಗಳ ಮೊರೆಹೊಕ್ಕರು. ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ದೇವತೆಯನ್ನು ಸೃಷ್ಟಿಸಿದರು ಹಾಗೂ ಎಲ್ಲಾ ದೇವರ ಶಕ್ತಿಯು ಸೇರಿ ದೇವಿಯು ದುರ್ಗೆಯ ಅವತಾರವೆತ್ತಿದಳು.

ಈ ದೇವಿಯು ೧೦ ಕೈಗಳನ್ನು ಹೊಂದಿರುವ ಸುಂದರ ಸ್ತ್ರೀಯಾಗಿ ಹುಟ್ಟಿದ ನಂತರ ದೇವತೆಗಳೆಲ್ಲರು ತಮ್ಮ ತಮ್ಮ ಆಯುಧಗಳನ್ನು ದೇವಿಗೆ ನೀಡಿದರು. ಈಶ್ವರನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ವರುಣ ದೇವನು ಪಾಶವನ್ನು, ಇಂದ್ರನು ವಜ್ರಾಯುಧವನ್ನು, ಹಾಗೂ ವಾಯು ದೇವನು ಬಾಣಗಳನ್ನು ನೀಡಿದರು ಹಾಗೂ ವಸ್ತ್ರವನ್ನು ಹಾಗೂ ದೇವಿಯ ವಹನವಾದ ಸಿಂಹವನ್ನು ಪರ್ವತಗಳ ರಾಜ ಹಿಮವಂತನು ನೀಡಿದನು. ಎಲ್ಲಾ ಆಯುಧಗಳಿಂದ ಸನ್ನಧಳಾದ ದೇವಿಯು ಯುದ್ಧಕ್ಕೆ ಸನ್ನದ್ಧಳಾದಳು. ಒಂಭತ್ತು ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ದೇವಿಯು ಒಂಭತ್ತನೆ ದಿನ ಮಹಿಷಾಸುರನ ಸಂಹಾರ ಮಾಡಿದಳು ಆ ದಿನವೇ ವಿಜಯ ದಶಮಿ.

ಒಂಭತ್ತು ಅವತಾರಗಳು

ಶೈಲ ಪುತ್ರಿ

ನವರಾತ್ರಿಯ ಮೊದಲ ದಿನವನ್ನು ಪ್ರತಿಪಾದ ಎಂದು ಕರೆಯುತ್ತಾರೆ. ಈ ದಿನ ಶೈಲ ಪುತ್ರಿಯ ರೂಪವನ್ನು ಪೂಜಿಸಲಾಗುತ್ತದೆ. ಶೈಲ ಪುತ್ರಿ ಎಂದರೆ ಪರ್ವತ ರಜನ ಮಗಳು ಎಂದರ್ಥ. ಶೈಲ ಪುತ್ರಿಯು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಪತಿಯಾದ ಶಿವನನ್ನು ಅವಮಾನ ಮಡಿದಕ್ಕಾಗಿ ಸತಿ ದೇವಿಯು ಅಗ್ನಿ ಕುಂಡಕ್ಕೆ ಜಿಗಿದು ಪ್ರಾಣಾರ್ಪಣೆ ಗೈಯುತ್ತಾಳೆ. ಶಿವನನ್ನು ಮರಳಿ ಪಡೆಯುವ ಸಲುವಾಗಿ ಮರು ಜನ್ಮವೆತ್ತುತ್ತಾಳೆ. ಆದರೆ ಸತಿ ಸಾವಿನಿಂದ ಶಿವ ಧ್ಯಾನದಲ್ಲಿ ಮುಳುಗಿ ಹೋಗಿದ್ದ. ದೇವಿ ಶೈಲ ಪುತ್ರಿಯು ಕಾಡಿಗೆ ಹೋಗಿ ೧೬ ವರ್ಷ ತಪಸ್ಸು ಮಾಡಿ ಶಿವನನ್ನು ಪಡೆಯುತ್ತಾಳೆ.

ಬ್ರಹ್ಮಚಾರಿಣಿ

ಎರಡನೇ ದಿನ ದೇವಿ ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ, ಪಾರ್ವತಿಯಾಗಿ ಹಿಮಾಲಯನ ಮಗಳಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿಪಡೆಯುವ ಸಲುವಾಗಿ ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ, ಈ ಕಾರಣದಿಂದ ದೇವಿಗೆ ಬ್ರಹ್ಮಚಾರಿ ಎಂಬ ಹೆಸರು ಬಂದಿದೆ.

ಚಂದ್ರ ಘಂಟ ದೇವಿ

ಮೂರನೇ ದಿನ ಚಂದ್ರ ಘಂಟ ದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾ ಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ದುರ್ಗಾ ಮಾತೆಯ ರೌದ್ರ ಸ್ವರೂಪವೆಂದು ಕರೆಯಲಾಗುತ್ತದೆ. ಹೊಸದಾಗಿ ವಿವಾಹವಾದ ದುರ್ಗಾ ಮಾತೆಯನ್ನು ಚಂದ್ರ ಘಂಟ ದೇವಿಯ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವದ ತಪಸ್ಸನ್ನು ಮಾಡಿ ಶಿವನನ್ನು ಮದುವೆಯಾಗುವಲ್ಲಿ ಸಫಲಳಾಗುತ್ತಾಳೆ. ಹಾಗೂ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸಲು ಮುಂದಗುತ್ತಾನೆ, ಅತೀ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯು ಮೂರ್ಛೆ ಹೋಗುತ್ತಾಳೆ ಮತ್ತೆ ಪಾರ್ವತಿದೇವಿಯು ಚಂದ್ರ ಘಂಟದೇವಿಯ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ರಾಜ ಕುಮಾರನ ರೂಪವನ್ನು ತಾಳಬೇಕು ಎಂದು ವಿನಂತಸುತ್ತಾಳೆ ನಂತರ ಇಬ್ಬರ ಮದುವೆ ನಡೆಯುತ್ತದೆ.

ಕೂಷ್ಮಾಂಡ ದೇವಿ

ನಾಲ್ಕನೇ ದಿನದಂದು ದೇವಿಯು ಕೂಷ್ಮಾಂಡಿನಿ ದೇವಿಯ ಅವತಾರವೆತ್ತುತ್ತಾಳೆ. ಕೂಷ್ಮಾಂಡಿನಿಯನ್ನು ಭೂಮಿಯ ಸೃಷ್ಟಿಕರ್ತೆ ಎನ್ನುತ್ತಾರೆ. ಎಂಟು ಭುಜಗಳಿರುವ ಈ ದೇವಿಯನ್ನು ಅಷ್ಟಬುಜಾದೇವಿ ಎಂದೂ ಕೆರಯುತ್ತಾರೆ. ಸೃಷ್ಟಿಯ ಅಸ್ತಿತ್ವ ಇಲ್ಲದಿರುವಾಗ ಈ ದೇವಿಯು ಭೂಮಿಯನ್ನು ಸೃಷ್ಟಿಸಿದ್ದಾಳೆ ಆದ್ದರಿಂದ ಈಕೆ ಸೃಷ್ಟಿಯ ಆದಿ ಸ್ವರೂಪಾವಗಿದ್ದಾಳೆ.

ಸ್ಕಂದ ಮಾತೆ

ಐದನೇಯ ದಿನ ಸ್ಕಂದ ಮಾತೆಯ ಪೂಜೆಯಾಗುತ್ತದೆ. ಸ್ಕಂದ ಎಂದರೆ ಕಾರ್ತಿಕೇಯ. ಕಾರ್ತಿಕೇಯನ ತಾಯಿಯೇ ಸ್ಕಂದ ಮಾತೆ. ಮಗನನ್ನು ತನ್ನ ತಿಡೆಯ ಮೇಲೆ ಕೂರಿಸಿಕೊಂಡಿರುವ ರೂಪದಲ್ಲಿ ಈ ದೇವಿಯು ಕಾಣಿಸಿಕೊಳ್ಳುತ್ತಾಳೆ.

ಕಾತ್ಯಾಯಿನಿ

ಆರನೇ ದಿನ ಕಾತ್ಯಾಯಿನಿಯನ್ನು ಆರಾಧಿಸಲಾಗುತ್ತದೆ. ಒಮ್ಮೆ ಕಾತ್ಯಾಯನ್ ಎನ್ನುವ ಋಷಿಯು ಯನಗೆ ಪಾರ್ವತಿ ದೇವಿಯಂತಹ ಮಗಳು ಬೇಕೆಂದು ತಪಸ್ಸು ಮಾಡುತ್ತಾನೆ . ದುರ್ಗಾಮಾತೆಯು ಪ್ರಸನ್ನಳಾಗಿ ಆಶಿರ್ವಾದ ಮಾಡುತ್ತಾಳೆ ಹಾಗೂ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ನಾಮಕರಣ ಮಾಡುತ್ತಾನೆ. ಕಾತ್ಯಾಯಿನಿಯು ದೊಡ್ಡವಳಾದ ಮೇಲೆ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರ ಹಿಡಿದು ರಾಕ್ಷಸರನ್ನು ನಾಶ ಮಾಡಲು ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು.ಎಂದು ಹೇಳಲಾಗುತ್ತದೆ.

ಕಾಲರಾತ್ರಿ

ಏಳನೇ ದಿನ ದುರ್ಗಾ ದೇವಿಯು ಕಾಳ ರಾತ್ರಿಯ ರೂಪ ಧರಿಸುತ್ತಾಳೆ. ರೌದ್ರಾವತಾರ ಮತ್ತು ಉಗ್ರ ರೂಪದಲ್ಲಿರುವ ಕಾಲ ರಾತ್ರಿ ದೇವಿಯು ರಾಕ್ಷಸರ ವಿರುದ್ಧ ಹೋರಡಲು ಹೋಗುತ್ತಾಳೆ ಹಾಗೂ ಆಕೆಯನ್ನು ಶುಭಾಂಕರಿ ಅಥವಾ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಮಹಾ ಗೌರಿ ನವರಾತ್ರಿಯ ಎಂಟನೇ ದಿನದಂದು ಮಹಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಗೌರಿ ಎಂದರೆ ಗಿರಿ ಅಥವ ಪರ್ವತದ ಮಗಳು ಎಂದು ಹೇಳಲಾಗುತ್ತದೆ. ಗೂಳಿಯ ಮೇಲೆ ಪ್ರಯಾಣಿಸುವ ಗೌರಿ ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಕೈಯಲ್ಲಿ ಹಿಡಿದಿರುತ್ತಾಳೆ.

ಸಿದ್ಧಿ ಧಾತ್ರಿ

ದುರ್ಗೆಯ ಒಂಭತ್ತನೇ ಅವತಾರ ಸಿದ್ಧಿ ಧಾತ್ರಿ. ಈ ದೇವಿಯು ತ್ರಿಮೂರ್ತಿಗಳಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುತ್ತಾಳೆ. ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ತ್ರಿಮೂರ್ತಿಗಳಿಗೆ ನೀಡುತ್ತಾಳೆ ಎಂದು ಹೇಳಲಾಗುತ್ತದೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *