ಮೂಡುಬಿದಿರೆ: ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನ (Sri Gopalakrishna Kodamanittaya Temple) ಮಾರೂರು-ಹೊಸಂಗಡಿ ಇದರ ಜೀರ್ಣೋದ್ಧಾರ ಪೂರ್ವಭಾವಿ ಸಭೆಯ ಪ್ರಯುಕ್ತ ಮಾಗಣೆಗೆ ಸಂಬಂಧಿಸಿದ ಮಾರ್ಪಾಡಿ-ಕಲ್ಲಬೆಟ್ಟು ಗಾಮದ ಗ್ರಾಮ ಸಮಿತಿಯನ್ನು ನಡ್ಯೋಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಶ್ರೀಪತಿ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಮಾರೂರು-ಖಂಡಿಗ ಶ್ರೀ ರಾಮದಾಸ್ ಅಸ್ರಣ್ಣರ (Maruru_Khandiga Shri Ramdas Asranna) ಮಾರ್ಗದರ್ಶನದಲ್ಲಿ ರಚಿಸಲಾಯಿತು.
ಗ್ರಾಮ ಸಮಿತಿ ಗೌರವ ಅಧ್ಯಕ್ಷರಾಗಿ (Village Committee Honorary President) ಎಂ. ವಸಂತ ಶೆಟ್ಟಿ ಹಾಗೂ ಅಧ್ಯಕ್ಷರನ್ನಾಗಿ ಸುರೇಶ್ ಕೋಟ್ಯಾನ್ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಕೃಷ್ಣ ಎ. ಕೋಟ್ಯಾನ್, ವಿಶ್ವನಾಥ ಕೋಟ್ಯಾನ್, ಸುರೇಂದ್ರ ಶೆಟ್ಟಿ, ಸತೀಶ್ ಪೂಜಾರಿ, ಕಾರ್ಯದರ್ಶಿಯಾಗಿ ಪ್ರಸನ್ನ ಹೆಗ್ಡೆ, ಜತೆ ಕಾರ್ಯದರ್ಶಿಗಳಾಗಿ ದಿಲೀಪ್ ಶೆಟ್ಟಿ, ಗಂಗಾಧರ ಪೂಜಾರಿ, ಗೌರವ ಸಲಹೆಗಾರರಾಗಿ ಪುರುಷೋತ್ತಮ ಶೆಟ್ಟಿ , ಸುಂದರ ಹೆಗ್ಡೆ, ಚಿನ್ನಯ್ಯ ಕೋಟ್ಯಾನ್ ಹಾಗೂ ಧರ್ಣಪ್ಪ ಪೂಜಾರಿಯವರನ್ನು ಆಯ್ಕೆ ಮಾಡಲಾಯಿತು. ಸಮಿತಿಗೆ ಸದಸ್ಯರ ಹೆಸರನ್ನು ಸೂಚಿಸಲಾಯಿತು.
ಇದನ್ನ ಓದಿ: ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಧಾರ್ಮಿಕ ಪ್ರವಾಸ
ಜೀರ್ಣೋದ್ಧಾರ ಸಮಿತಿ (Rehabilitation Committee) ಅಧ್ಯಕ್ಷ ಕೆ. ಶ್ರೀಪತಿ ಭಟ್ ಮಾತನಾಡಿ ಗೋಪಾಲಕೃಷ್ಣ ದೇವಸ್ಥಾನದ ಜೀಣೋದ್ಧಾರ ಕರ‍್ಯದ ಹಿನ್ನೆಲೆಯಲ್ಲಿ ದೇವಸ್ಥಾನದ ಮಾಗಣೆಗೆ ಸಂಬಂಧಿಸಿದ ಎಲ್ಲಾ ಗ್ರಾಮಗಳಲ್ಲಿ ಗ್ರಾಮಸಮಿತಿ ರಚಿಸುವ ಪ್ರಕ್ರಿಯೆ ನಡೆಯುತ್ತಿದ್ದು ಗ್ರಾಮಸ್ಥರು ಸಹಕಾರ ನೀಡುವಂತೆ ವಿನಂತಿಸಿದರು. ಇದೇ ವೇಳೆ ಅವರು ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಅವರಿಗೆ ದೇವಸ್ಥಾನದ ವಿಜ್ಞಾಪನೆ ಪತ್ರವನ್ನು ಹಸ್ತಾಂತರಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಮುಖರಾದ ಶ್ರೀಧರ್ ಕೆಮ್ಮಾರ್, ಗೋಪಾಲ್ ಕೋಟ್ಯಾನ್, ಶಂಕರ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಪ್ರಸನ್ನ ಹೆಗ್ಡೆ ನಿರೂಪಿಸಿದರು