ಮೂಡುಬಿದಿರೆ: ಕರಾವಳಿ ಕೇಸರಿ ಸೇವಾ ಟ್ರಸ್ಟ್ ಬೆದ್ರ(Kesari seva trust),ಕರಾವಳಿ ಕೇಸರಿ ಮಹಿಳಾ ಘಟಕ ದರೆಗುಡ್ಡೆ ಇವುಗಳ ಅಶ್ರಯದಲ್ಲಿ ದರೆಗುಡ್ಡೆ ಶಾಲಾ ಆವರಣದಲ್ಲಿ ಜ. 28ರಂದು ಸಾಯಂಕಾಲ 4ರಿಂದ ವೇ.ಮೂ ನಾಗರಾಜ ಭಟ್ ಪೌರೋಹಿತ್ಯದಲ್ಲಿ ಶನೈಶ್ಚರ ಪೂಜೆ (Shaneschar pooja)ನಡೆಯಲಿದೆ.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕಲಾಪಗಳು ನಡೆಯಲಿವೆ. ರಾತ್ರಿ 8.30ಕ್ಕೆ ಹಿರಿಯ ಸಹಕಾರಿ ಭಾಸ್ಕರ ಎಸ್. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಧಾರ್ಮಿಕ ಸಭೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿರುವರು. ಬೆಂಗಳೂರಿನ ಹಾರಿಕಾ. ಮಂಜುನಾಥ್ ದಿಕ್ಕೂಚಿ ಭಾಷಣ ಮಾಡಲಿರುವರು. ಸಮಾಜ ಸೇವಕರಾದ ಹುರ್ಲಾಡಿ ರಘುವೀರ್ ಶೆಟ್ಟಿ, ರಾಘು ಸಿ. ಪೂಜಾರಿ, ಉದ್ಯಮಿ ಜಗದೀಶ ಕೋಟ್ಯಾನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಅಚ್ಯುತ ಮಾರ್ನಾಡ್, ಭಾಸ್ಕರ ಪಾಲಡ್ಕ ಅವರಿಗೆ ಸನ್ಮಾನ, ಅನಾರೋಗ್ಯ ಪೀಡಿತರಿಗೆ ಸಹಾಯ ಧನ ವಿತರಣೆ ಮಾಡಲಾಗುವುದು, ಸಭೆಗೂ ಮುನ್ನ 7.30ರಿಂದ ವಾಮದಪದವು ಸಪ್ತಸ್ವರ ಮೆಲೊಡೀಸ್(Vamadapadav Sapthaswara melodies) ಮತ್ತು ಕೆಲ್ಲಪುತ್ತಿಗೆ ಕಟೀಲೇಶ್ವರೀ ಮೆಲೋಡೀಸ್(Kateeleshwari Melodies) ಅವರಿಂದ ಸಂಗೀತ ರಸಮಂಜರಿ, ಸಭೆಯ ಬಳಿಕ ಚೈತನ್ಯ ಕಲಾವಿದರು ಬೈಲೂರು ಅವರಿಂದ ವಾರ್ಡ್ ನಂ.ಸೆಕೆAಡ್ ತುಳು ನಾಟಕ ಪ್ರದರ್ಶನ ಸಂಯೋಜಿಸಲಾಗಿದೆ ಎಂದು ಸಂಘಟನೆಯ ಸ್ಥಾಪಕಾಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.