ಮೂಡುಬಿದಿರೆ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ (Kuriya Vitala Shastri Cultural Foundation) ರಜತ ಮಹೋತ್ಸವದಂಗವಾಗಿ (Silver Jubilee)ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಬ್ರಹ್ಮಾನಂದ ಸದನದಲ್ಲಿ ಶ್ರೀರಾಮಾಯಣ ದರ್ಶನಂ ತಾಳಮದ್ದಳೆಯ (Sri Ramayana Darshanam Talamaddale) ಸಪ್ತಾಹವನ್ನು ಮಂಗಳವಾರ ಉದ್ಘಾಟಿಸಲಾಯಿತು.
ದೇವಳದ ಆಡಳಿತ ಮೊಕ್ತೇಸರ ರಘುನಾಥ ವಿ.ಎಲ್ (Raghunath VL)ಸಪ್ತಾಹವನ್ನು ಉದ್ಘಾಟಿಸಿದರು. ಯಕ್ಷಗಾನ ನಮ್ಮಲ್ಲಿ ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸುತ್ತದೆ ಎಂದು ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು (Harikrishna Punaruru former president of Rajya Kasapa)ಅಧ್ಯಕ್ಷತೆ ವಹಿಸಿದ್ದರು.
ಇದನ್ನು ಓದಿ: ಮೂಡುಬಿದಿರೆ ತಾಲೂಕಿನ ಬಂಡೆಕಲ್ಲಿನಲ್ಲಿ ತುಳು ಶಾಸನ ಪತ್ತೆ
ಅಶ್ವತ್ಥಪುರ ದೇವಸ್ಥಾನದ ಅರ್ಚಕ ಪ್ರಭಾಕರ ಭಟ್, ಉದ್ಯಮಿ ಎ.ಕೆ.ರಾವ್, ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಯಕ್ಷ ಚೈತನ್ಯ, ಯಕ್ಷ ಮೇನಕಾದ ನೆಲ್ಲಿಮಾರು ಸದಾಶಿವರಾವ್ ಉಪಸ್ಥಿತರಿದ್ದರು.