ಮೂಡುಬಿದಿರೆ: ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ (Prime Minister Narendra Modi’s Mann Ki Baat) ಬಾನುಲಿ ಸರಣಿ ಶತಕದ ಸಂಭ್ರಮದ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ರಾಷ್ಟçದ ಆಯ್ದ ಕಲಾವಿದರನ್ನು ಆಹ್ವಾನಿಸಿ ಮನ್‌ಕೀ ಬಾತ್ ನೂರು ಆವೃತ್ತಿಯ ಸಾರಾಂಶವನ್ನು ಕಲಾಕೃತಿಗಳಲ್ಲಿ ವೇದಿಕೆಯನ್ನು ಕಲ್ಪಿಸಿತು. ಇದರಲ್ಲಿ ರಾಷ್ಟçದ 13 ಕಲಾವಿದರ ಪಾಲ್ಗೊಂಡಿದ್ದು, ಮೂಡುಬಿದಿರೆಯ ಚಿತ್ರಕಲಾವಿದ ಬಿ. ಮಂಜುನಾಥ ಕಾಮತ್ (Painter B. Manjunath Kamat) ಅವರ ಕಲಾಕೃತಿಯು ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿದೆ.
ಕಳೆದ ಮೂರು ತಿಂಗಳಿಂದ ಈ ಕಾರ್ಯ ಯೋಜನೆ ನಡೆದಿದ್ದು ಕಲಾಕಾರರಿಗೆ ಮನ್ ಕೀ ಬಾತ್ ಸರಣಿಯ ಚಿಂತನೆಗಳ ಸಾರಾಂಶವನ್ನು ಹದಿಮೂರು ಚಿಂತನೆಗಳಾಗಿ ನೀಡಲಾಗಿತ್ತು. ಇದೀಗ ಕಳೆದ ಕೆಲವು ದಿನಗಳ ಹಿಂದೆ ಕಲಾವಿದರ ಕಲಾಕೃತಿಗಳನ್ನೆಲ್ಲ ದೆಹಲಿಯ ನ್ಯಾಶನಲ್ ಗ್ಯಾಲರಿ ಆಫ್ ಮೋಡರ್ನ್ ಆರ್ಟ್ನಲ್ಲಿ `ಜನಶಕ್ತಿ ಒಂದು ಸಾಂಘಿಕ ಸಾಮರ್ಥ್ಯ ‘ ಹೆಸರಲ್ಲಿ ಪ್ರದರ್ಶನಕ್ಕೆ ಇರಿಸಿದ್ದು ಸ್ವಚ್ಚತೆ, ಜಲ ಸಂರಕ್ಷಣೆ, ಕೃಷಿ, ಬಾಹ್ಯಾಕಾಶ, ಈಶಾನ್ಯ ಭಾರತ, ನಾರೀಶಕ್ತಿ, ಯೋಗ, ಆಯುರ್ವೇದ ಹೀಗೆ ವಿವಿಧ ಪರಿಕಲ್ಪನೆಯ ಕಲಾಕೃತಿಗಳು ಈ ಪ್ರದರ್ಶನಗೊಂಡಿಚೆ. .
ಭೂಮಿ ಗುಂಡಗಿದೆ (Earth is round) ಎನ್ನುವುದನ್ನು ವರಾಹಾವತಾರದಲ್ಲಿ ಗೋಲಾಕಾರದ ಭೂಮಿಯನ್ನೆತ್ತಿದ ನಮ್ಮ ಪೌರಾಣಿಕ ಚರಿತ್ರೆಯ ಚಿತ್ರಗಳೇ ಸಾರಿವೆ. ಗ್ರಹಣಗಳ ಕಲ್ಪನೆಯನ್ನು ರಾಹು ಕೇತುಗಳು ನುಂಗುವ ಚಂದ್ರ, ಸೂರ್ಯ, ವಿಶ್ವರೂಪಿ ಪರಮಾತ್ಮನ ಚಿತ್ರಣದ ಮೂಲಕ ಭಗವಂತನೆಂಬ ಅಗೋಚರ ಮಹತ್ವದ ಶಕ್ತಿ ಹೀಗೆ ಚಿತ್ರಿಸಿ ಜಗತ್ತಿಗೇ ಮೊದಲ ತಿಳುವಳಿಕೆ ನೀಡಿದ ಭಾರತ ಜಗದ್ವಂದ್ಯ (India is a world champion) ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ನಿದರ್ಶನಗಳಿವೆ. ವಿಶ್ವಕ್ಕೆ ಭಾರತ ಹೇಗೆ ಮಹತ್ವದ್ದು ಎನ್ನುವ ಮೋದಿಜಿಯವರ ಚಿಂತನೆ, ನಮ್ಮ ಐತಿಹಾಸಿಕ ಹಿನ್ನೆಲೆಯ ಥೀಮ್ ಆಯ್ದುಕೊಂಡು ಕಲಾಕೃತಿ ರಚಿಸಿದ್ದೆ. ಕಲೆಯಲ್ಲಿ ವಿಶೇಷ ಆಸಕ್ತಿಯಿರುವ ಮೋದಿಜಿಯವರು ಸಾಕಷ್ಟು ಕುತೂಹಲದಿಂದಲೇ ನನ್ನ ಕಲಾಕೃತಿಯಲ್ಲಿ ಅಡಗಿರುವ ಸೂಕ್ಷ್ಮಗಳನ್ನು ವಿಚಾರಿಸಿ ತಿಳಿದುಕೊಂಡು ಸಂತಸಪಟ್ಟರು ಎಂದು ಮಂಜುನಾಥ್ ವಿವರಿಸಿದರು.
ಇದನ್ನ ಓದಿ: ಮೂಡುಬಿದಿರೆ: ನನ್ನ ಲೈಫ್ ನನ್ನ ಸ್ವಚ್ಛ ನಗರ ಅಭಿಯಾನಕ್ಕೆ ಚಾಲನೆ
ಮೂಲತಃ ಬಂಟ್ವಾಳದವರಾದ ಪುಂಡಲೀಕ ಕಾಮತ್- ಪ್ರಫುಲ್ಲಾ ದಂಪತಿಯ ಮಗನಾದ ಮಂಜುನಾಥ್ ಮಾರ್ಡನ್ ಆರ್ಟ್ನಲ್ಲಿಂದು ಹೆಸರಾಂತ ಕಲಾವಿದ. ದೆಹಲಿಯ ಎಸ್‌ಸ್ಪೇಸ್, ಮುಂಬೈನ ಸಾಕ್ಷಿ ಗ್ಯಾಲರಿಗಳ (Witness Gallery) ಮೂಲಕ ಅವರ ಕಲಾಕೃತಿಗಳು ಜಗದಗಲ ಹರಿದಾಡುತ್ತಿವೆ. ಚಿತ್ರಕಾರ, ಕಲಾವಿದರು ಬದುಕು ಕಟ್ಟಿಕೊಳ್ಳುವುದು ಕನಸಿನ ಮಾತು ಎಂಬ ಆ ಪರಿಸ್ಥಿತಿಯಲ್ಲೂ ಬಾಳ ಸಂಗಾತಿಯಾದ ಸೂರ್ಯಪ್ರದ, ಹೆಣ್ಣು ಕೊಟ್ಟ ಮಾವ ಮೂಡುಬಿದಿರೆಯ ಹಿರಿಯ ಪತ್ರಿಕಾ ವಿತರಕ ಸಹಕಾರಿ ಧುರೀಣ ದಯಾನಂದ ಪೈ ಅವರ ಪ್ರೋತ್ಸಾಹವನ್ನೂ ಮರೆಯಲಾಗದು ಅಂತಾರೆ ಮಂಜುನಾಥ್. ಇಬ್ಬರು ಮಕ್ಕಳ ಪೈಕಿ ಹಿರಿಯಾಕೆ ಮಾನ್ಯಳಿಗೆ ಕಲಾಶಿಕ್ಷಣದ ಈ ಮೊದಲ ವರ್ಷವೇ ಜಾಬ್ ಆಫರ್ ಗಿಟ್ಟಿಸುವ ಮಟ್ಟಕ್ಕೆ ಈಗ ಅವಕಾಶಗಳಿವೆ. ಕಿರಿಯಾಕೆ ಆದ್ಯ. ಕರ್ನಾಟಕ ಮೂಲದ ಕಲಾಕಾರರೆಲ್ಲ ನೆಂಟಸ್ತಿಕೆಯೇ ಬಾರದೇ ಉತ್ತರ ಭಾರತದ ಹುಡುಗಿಯರನ್ನು ವರಿಸಿದ ವಾಸ್ತವವನ್ನೂ ಅವರು ವಿಷಾದಪೂರ್ವಕ ವಿವರಿಸುತ್ತಾರೆ.