ಮೂಡುಬಿದಿರೆ: ಉತ್ತರ ಪ್ರದೇಶದ(Uttar pradesh)ಅಲಿಘರ್ ರಾಜ ಮಹೇಂದ್ರ ಪ್ರತಾಪ್‌ಸಿಂಗ್ ವಿಶ್ವವಿದ್ಯಾಲಯದಲ್ಲಿ ( Aligarh Raja Mahendra Pratapsingh University)ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಲ್ಲಕಂಬ ಸ್ಪರ್ಧೆಯ(All India Inter University Mallakamba Competition) ಮಹಿಳಾ ವಿಭಾಗದ ಪಿರಮಿಡ್ ಸ್ಪರ್ಧೆಯಲ್ಲಿ (Women’s Division Pyramid Competition)ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಚಿನ್ನದ ಪದಕವನ್ನು ಪಡೆದಿದ್ದಾರೆ.
ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿನಿಯರಾದ ಪ್ರಿಯಾಂಕ, ಯಶೋಧಾ, ಲಕ್ಷ್ಮಿ, ಪ್ರತಿಭಾ, ಭಾಗ್ಯಶ್ರೀ, ಸ್ಪೂರ್ತಿ ಪಾಲ್ಗೊಂಡಿದ್ದರು. ಕರ್ನಾಟಕ (Karnataka)ರಾಜ್ಯದಿಂದ ಪಾಲ್ಗೊಂಡ ವಿಶ್ವವಿದ್ಯಾಲಯ ತಂಡವೊಂದು ಇದೇ ಮೊದಲ ಬಾರಿಗೆ ಮಹಿಳಾ ವಿಭಾಗದ ಪಿರಮಿಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದೆ. ಮಹಿಳಾ ಮತ್ತು ಪುರುಷರ ವಿಭಾಗದ ತಂಡಗಳೆರಡೂ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಪುರುಷರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕಾಲೇಜಿನ ರುದ್ರಮುನಿ, ಹನುಮಂತ, ಶ್ರೀಧರ, ಆಕಾಶ್, ಪ್ರಭು, ಕಾರ್ತಿಕ್ ಪಾಲ್ಗೊಂಡಿದ್ದರು. ತರಬೇತುದಾರರಾದ ಚೇತನ್ ಹಾಗೂ ಬಸವರಾಜ್ ಉಪಸ್ಥಿತರಿದ್ದರು.
ದತ್ತು ಯೋಜನೆ (Dathu project)ಮೂಲಕ ಕ್ರೀಡಾಪಟುಗಳಿಗೆ ತರಬೇತಿ ಕೊಡಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ (Dr.Mohan Alva)ಅಭಿನಂದಿಸಿದ್ದಾರೆ.https://moodabidri.newskannada.com/campus/a-record-for-the-largest-number-of-people-practicing-yoga-simultaneously