ಮೂಡುಬಿದಿರೆ: ವೈದಿಕ ಕುಟುಂಬದವರಿಗಾಗಿ ಬಂಟ್ವಾಳ ಮಾಣಿಯ ಬರಿಮಾರು ಶ್ರೀ ಮಹಾಮಾಯ ದೇವಸ್ಥಾನದ (Barimaru Sri Mahamaya Temple) ಮೈದಾನದಲ್ಲಿ ಜರಗಿದ ನಾಲ್ಕನೇ ವರ್ಷದ ವೈದಿಕ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ (Vedic Premier League Cricket Tournament) ಮೂಡುಬಿದಿರೆಯ ಸುಧೇಶ್ ಭಟ್ ನಾಯಕತ್ವದ ಭಟ್ಜೀಸ್ ಸೂಪರ್ ಕಿಂಗ್ಸ್ ತಂಡವು (Bhatjis Super Kings team) , ಸತತ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿ ಸತತ ಮೂರನೇ ಬಾರಿ ವಿಪಿಎಲ್ 2023 ಟ್ರೋಫಿ ತನ್ನದಾಗಿಸಿಕೊಂಡಿದೆ.
ಕರ್ನಾಟಕ, ಮಹಾರಾಷ್ಟ್ರ, ಕೇರಳ, ದೆಹಲಿ ಹೀಗೆ ವಿವಿಧೆಡೆಯ 300ಕ್ಕೂ ಅಧಿಕ ವೈದಿಕರು, ಅವರ ಮಕ್ಕಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.
ಮುಂಬೈನ ರಾಕಿಂಗ್ ವೈದಿಕ್ಸ್ ತಂಡವು (Rocking Vaidics team from Mumbai) ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಿತು. ಭಟ್ ಬ್ರದಸರ್್ ಹಾಗೂ ಅನಂತ ವೈದಿಕ್ಸ್ ಮಂಜೇಶ್ವರ ತಂಡವು ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯಿತು.
ಸೂಪರ್ ಕಿಂಗ್ಸ್ ತಂಡದ ನಾಯಕ ಸುಧೇಶ್ ಭಟ್ (ಫೈನಲ್ ಪಂದ್ಯಶ್ರೇಷ್ಠ ) ಮುಂಬೈ ತಂಡದ ಅಜಿತ್ ಭಟ್ (ಸರಣಿಶ್ರೇಷ್ಠ ) ಸೂಪರ್ ಕಿಂಗ್ಸ್ ತಂಡದ ರಾಮನಾಥ್ ಭಟ್ (ಉತ್ತಮ ದಾ0ಡಿಗ) ,ರಾಕಿಂಗ್ ವೈದಿಕ್ಸ್ ಮುಂಬೈ ತಂಡದ ವಿನಾಯಕ ಭಟ್ (ಉತ್ತಮ ಎಸೆತಗಾರ) ಪ್ರಶಸ್ತಿಯನ್ನು ಪಡೆದರು.
ಇದನ್ನ ಓದಿ: ಸುಖಾನಂದ ಶೆಟ್ಟಿ, ಪ್ರಶಾಂತ್ ಪೂಜಾರಿ ಟ್ರೋಫಿ ಕಬಡ್ಡಿ ಪಂದ್ಯಾಟ
ವಿಪಿಎಲ್ನ ಸಂಸ್ಥಾಪಕ , ಮುಖ್ಯ ಸಂಯೋಜಕ ಪಂಡಿತ್ ಎಂ. ಕಾಶೀನಾಥ್ ಆಚಾರ್ಯ ಮಂಗಳೂರು, ಬರಿಮಾರು ಮಹಾಮಾಯಾ ದೇವಸ್ಥಾನದ ಧರ್ಮದಶರ್ಿ ಬಿ. ರಾಕೇಶ್ ಪ್ರಭು ಹಾಗೂ ಹಲವು ಹಿರಿಯ ವೈದಿಕರು,ಗಣ್ಯರು ಪಾಲ್ಗೊಂಡು ಪ್ರಶಸ್ತಿಗಳನ್ನು ವಿತರಿಸಿದರು. ಗೋಪಿ ಭಟ್ ಮಂಗಳೂರು ಕಾರ್ಯಕ್ರಮವನ್ನು ನಿರೂಪಿಸಿದರು. ಹರೀಶ್ ಭಟ್ ಮುಂಬೈ, ರಮೇಶ್ ಭಟ್ ಉಡುಪಿ ಸಹಕರಿಸಿದರು.