ಮೂಡಬಿದಿರೆ: ದಿ. ಸುಖಾನಂದ ಶೆಟ್ಟಿ ಮತ್ತು ದಿ. ಪ್ರಶಾಂತ್ ಪೂಜಾರಿ (Late Sukhananda Shetty and Late Prashant Pujary) ಅವರ ಸ್ಮರಣಾರ್ಥ ಹಿಂದು ಜಾಗರಣ ವೇದಿಕೆ, ಹಿಂದು ಯುವವಾಹಿನಿ ಮಂಗಳೂರು (Hindu Yuva Vahini Mangalore) , ಗ್ರಾಮಾಂತರ ಜಿಲ್ಲೆ, ಕರಾವಳಿ ಕೇಸರಿ ಸೇವಾ ಟ್ರಸ್ಟ್ (ರಿ.) ಬೆದ್ರ ಇವರ (Coastal Saffron Seva Trust (R.) Bedra) ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಬಡ್ಡಿ ಅಮೇಚೂರು ಅಸೋಸಿಯೇಶನ್ (Dakshina Kannada District Kabaddi Amateur Association) ಇವರ ಸಹಯೋಗದೊಂದಿಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಹಿಂದು ಬಾಂಧವರಿಗಾಗಿ ಮುಕ್ತ ಮಾದರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (National Volunteer Association) ಪ್ರಮುಖರಾದ ಗೋಪಾಲಕೃಷ್ಣ ಭಟ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ದಿ|ಪ್ರಶಾಂತ್ ಪೂಜಾರಿಯವರ ಮಾತೃಶ್ರೀ ಯಶೋದ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಚಿವ ವಿ. ಸುನಿಲ್ ಕುಮಾರ್ (Minister V. Sunil Kumar) ಭಾಗವಹಿಸಿ ಮಾತನಾಡಿ ಹಿಂದು ಜಾಗರಣ ವೇದಿಕೆಯು ಸಮಾಜಮುಖಿಯಾಗಿ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವುದಕ್ಕೆ ಶ್ಲಾಘಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan)ಮಾತನಾಡಿ ಯುವಕರು ಮಣ್ಣಿನ ಕ್ರೀಡೆಯಾಗಿರುವ ಕಬಡ್ಡಿಯಲ್ಲಿ ಆಸಕ್ತರಾದಾಗ ದೈಹಿಕ ಸದೃಢತೆ ಸಾಧ್ಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮೇಘನಾದ ಶೆಟ್ಟಿ, ಹಿಂಜಾವೇ ಜಿಲ್ಲಾ ಸಂಚಾಲಕ ಪ್ರಕಾಶ್ ಕುಂಪಲ, ಮಹೇಶ್ ಕುತ್ತಾರ್, ಮಹೇಶ್ ಶೆಣೈ, ಜಿಲ್ಲಾ ಸಹಸಂಚಾಲಕ ಸಮಿತ್‌ರಾಜ್ ದರೆಗುಡ್ಡೆ, ತಾಲೂಕು ಸಂಚಾಲಕ ಸಂದೀಪ್ ಹೆಗ್ಡೆ, ಕರಾವಳಿ ಟ್ರಸ್ಟ್‌ನ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಉದ್ಯಮಿ ಸತ್ಯಪ್ರಕಾಶ್ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು. ಸುಮಾರು 23 ರಾಜ್ಯಮಟ್ಟದ ಹಾಗೂ 16 ಗ್ರಾಮೀಣ ಮಟ್ಟದ ತಂಡಗಳು (23 state level and 16 rural level team) ಭಾಗವಹಿಸಿದ್ದವು.
60 ಕೆಜಿ ವಿಭಾಗದಲ್ಲಿ ಸಾಯಿ ಮಾರ್ನಾಡ್ ಪ್ರಥಮ, ಗಣೇಶ್ ಕಟ್ಟೆ ನಾವೂರ ದ್ವಿತೀಯ, ಆದಿಶಕ್ತಿ ಮಿತ್ತೂರು ತೃತೀಯ (Adishakti Mittur), ಚುಕ್ಕಿ ಫ್ರೆಂಡ್ಸ್ ಪೊಳಲಿ (Chukki Friends Polali) ಚತುರ್ಥ ಸ್ಥಾನ ಪಡೆದುಕೊಂಡಿತು.
ಇದನ್ನ ಓದಿ: ನೆಲ್ಲಿಗುಡ್ಡೆ 39ನೇ ವರ್ಷದ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ
ಗ್ರಾಮೀಣ ವಿಭಾಗದಲ್ಲಿ ವಿ.ಎಸ್. ಎರೆಂಜರ್‍ಸ್ ಅಳಿಯೂರು ಪ್ರಥಮ, ಜೆ.ಕೆ. ಅಟ್ಯಾಕರ್‍ಸ್ ದ್ವಿತೀಯ, ವಿಷ್ಣುಕಟ್ಟೆ ತೃತೀಯ, ಇಂಚರಾ ಪಿಳ್ಯ ಚತುರ್ಥ ಸ್ಥಾನ ಪಡೆದುಕೊಂಡಿತು.