ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು (Swasthishree Charukirthi Bhattarak Panditacharyavarya Swamiji) ಹರ್ಯಾಣ ಹಾಗೂ ದೆಹಲಿಯ ಬಸದಿಗಳಿಗೆ ಭೇಟಿ ನೀಡಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಹರ್ಯಾಣ ದಾರುವೇಡಾ ಭಗವಾನ್ ಶಾಂತಿ ನಾಥ ಸ್ವಾಮಿ (Haryana Daruveda Bhagavan Shanti Nath Swami) ಬಸದಿಯಲ್ಲಿ ಮಹಾ ಅಭಿಷೇಕ ಮಾತೆ ಪದ್ಮಾವತಿ ಆರಾಧನೆ ಪುಷ್ಪ ಅರ್ಚನೆ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಆಶೀರ್ವಚನ ನೀಡಿ, ಪೂಜೆ, ಭಜನೆ, ತಪಸ್ಸು ನಿರತ ಸಾಧಕರು ಜೀವನ ದಲ್ಲಿ ಶಾಂತಿ ನೆಮ್ಮದಿ ಪಡೆಯಲು ಸಾಧ್ಯ ಎಂದರು.
ಕಾಮಗಾರಿ ಪ್ರಗತಿಯಲ್ಲಿರುವ ಸಹಸ್ರ ಕೂಟ ಜಿನಾಲಯವನ್ನು ಸ್ವಾಮೀಜಿ ವೀಕ್ಷಿಸಿದರು. ಅಧ್ಯಕ್ಷ ರಾಜ್ ಕುಮಾರ್ ಜೈನ್ ಪದಾಧಿಕಾರಿಗಳಾದ ಉರ್ಮಿಳಾ ದೇವಿ ಜೈನ್ ಪ್ರದ್ಯುಮ್ನ ಜೈನ್, ಅರುಣ್ ಜೈನ್ ಉಪಸ್ಥಿತರಿದ್ದರು.
ಬಳಿಕ ತಿಜಾರ ಅತಿಶಯ ಕ್ಷೇತ್ರಕ್ಕೆ ಭಗವಾನ್ ಚಂದ್ರಪ್ರಭ ಸ್ವಾಮಿ ದರ್ಶನ ಮಾಡಿದರು. ಪ್ರಾಕೃತ ಆಚಾರ್ಯ 108 ಸುನೀಲ್ ಸಾಗರ ಮುನಿ ರಾಜರನ್ನು ಸಂಘದ 60ಸಾಧು ಸಾದ್ವಿಯರನ್ನು ಭೇಟಿ ಮಾಡಿ ಸಂಘದ ಧರ್ಮಸಭೆಯಲ್ಲಿ ಭಾಗಿಯಾದರು.
ಯಮುನಾ ನದಿ (Yamuna River) ತೀರದ ಮಾನವ ಮಂದಿರದಲ್ಲಿ ಹಿರಿಯ ಸಾಧು ರೂಪ್ ಚಂದ್ ಮುನಿರಾಜರನ್ನು ಭೇಟಿ ಮಾಡಿದರು.
ಇದನ್ನ ಓದಿ: ಸಮಾಜ ಸೇವೆಯಲ್ಲಿ ಎತ್ತಿದ ಕೈ ಮಿಥುನ್ ರೈ
ಪಾಕಿಸ್ತಾನದಿಂದ ವಾಪಸ್ಸು ಅದ ನಿರ್ವಸಿತ ಹಿಂದೂ ಸಮುದಾಯದ ಸುಮಾರು 70 ಕುಟುಂಬಗಳಿಗೆಗೌರವಾರ್ಪಣೆ ಮಾಡಿದರು. ದೆಹಲಿ ರಾಜಬಜಾರ್ ಅಗ್ರವಾಲ ದಿಗಂಬರ ಜೈನ್ ಮಂದಿರದಲ್ಲಿ ಆಚಾರ್ಯ (Digambara Jain Mandir Acharya) 108 ಪ್ರಾಗ್ಯ ಸಾಗರ ಮುನಿ ರಾಜ ರ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು 2550 ರ ಭಗವಾನ್ ಮಹಾವೀರ್ ನಿರ್ವಾಣ (Lord Mahavir Nirvana) ಕಾರ್ಯಕ್ರಮದ ಮುಂದಿನ ಕಾರ್ಯಕ್ರಮ ಯೋಜನೆಗಳ ಸಮಾಲೋಚನೆ ನಡೆಸಿದರು.