ಮೂಡುಬಿದಿರೆ: ತಂಡ ಅಥವಾ ವ್ಯವಸ್ಥೆಯಲ್ಲಿ ಒಂದಾಗಿ ಮುನ್ನಡೆಸುವುದೇ ನಾಯಕತ್ವ. ವ್ಯವಸ್ಥೆಯಿಂದ ಹೊರಗುಳಿಯುವವ ನಾಯಕನಲ್ಲ. ವ್ಯವಸ್ಥೆಯಲ್ಲಿ ಬದಲಾವಣೆ ತರುವವರೇ ನೈಜ ನಾಯಕರು. ಜೀವಾನಾನುಭ ಬದುಕಿಗೆ ಭದ್ರ ಬುನಾಧಿಯನ್ನು ಹಾಕುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ (Alwas Education Foundation Manager) ಟ್ರಸ್ಟಿ ವಿವೇಕ್ ಆಳ್ವ (Trusty Vivek Alva)ಹೇಳಿದರು.
ಆಳ್ವಾಸ್ ಪಿಯು ಕಾಲೇಜಿನ ಸಾಂಸ್ಕೃತಿಕ ಸಂಘದ (Cultural Association)ವತಿಯಿಂದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ(Dr. V.S. Acharya Hall) ಮಂಗಳವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ಮಹಮ್ಮದ್ ಸದಾಕತ್(Principal Prof. Muhammad Sadakat) ಮಾತನಾಡಿ, ಕಳೆದ 2 ವರ್ಷಗಳಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 767 ವಿದ್ಯಾರ್ಥಿಗಳು ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. ನಾವು ಶೇ.100 ಯಶಸ್ಸು ಬಯಸುವ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇದ್ದೇವೆ. ಇಲ್ಲಿ ಶೇ.99.99 ಸಾಧನೆಯೂ ಯಶಸ್ಸಾಗುವುದಿಲ್ಲ ಎಂದರು.
ಇದನ್ನ ಓದಿ: ಜೆಇಇ ಮೈನ್ಸ್ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾರ್ಥಿಗಳಿಂದ ಸಾಧನೆ
ಉಪ ಪ್ರಾಂಶುಪಾಲೆ ಜಾನ್ಸಿ ಪಿ.ಎನ್ (Vice Principal Jhansi P.N)ಉಪಸ್ಥಿತರಿದ್ದರು. ಉಪನ್ಯಾಸಕಿ ಉಷಾ ಬಿ. ಸ್ವಾಗತಿಸಿದರು. ದಿವ್ಯಾ ಡೆಂಬಳ ನಿರೂಪಿಸಿದರು. ಬಹಮಾನ ವಿಜೇತರ ಪಟ್ಟಿಯನ್ನು ಉಪನ್ಯಾಸಕಿಯರಾದ ಅಮೃತಾ, ಭವ್ಯ, ವೇದಾ ವಾಚಿಸಿದರು. ಉಪನ್ಯಾಸಕ ಧರ್ಮೇಂದ್ರ ಕುದ್ರೋಳಿ ವಂದಿಸಿದರು.